

8th June 2025

ಮುಧೋಳ : ಆರ್.ಸಿ.ಬಿ. ಐಪಿಎಲ್ ಟ್ರೋಫಿ ಪಡೆದ ಸಂದರ್ಭದಲ್ಲಿ ನಡೆದ ವಿಜಯೋತ್ಸವ ಸಂದರ್ಭದಲ್ಲಿ ಕಾಲ್ತುಳತಕ್ಕೆ ಸಿಕ್ಕು 11 ಜನ ಅಮಾಯಕರು ಮರಣ ಹೊಂದಿರುವ ಘಟನೆಯ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಈ ಕೂಡಲೇ ರಾಜೀನಾಮೆ ಕೊಡಬೇಕೆಂದು ಬಿಜೆಪಿ ಧುರೀಣರಾದ ಅರುಣ ಗೋವಿಂದ ಕಾರಜೋಳ ಒತ್ತಾಯಿಸಿದರು.
ಕಾಲ್ತುಳಿತ ಘಟನೆ ನಡೆಯಲು ಡಿಸಿಎಂ ಡಿ.ಕೆ.ಶಿವಕುಮಾರ ಅವರಾಲಿ, ಆರ್.ಸಿ.ಬಿ., ಕೆಎಸ್ ಸಿಎ, ಮಂತ್ರಿಮಂಡಲವಾಗಲಿ, ಅಧಿಕಾರಿಗಳಾಗಲಿ ಯಾರೂ ಕಾರಣರಲ್ಲ. ಮುಖ್ಯಮಂತ್ರಿ ಸಿದ್ಧರಮಯ್ಯನವರ ಮೊಮ್ಮಗನ ಆಸೆ ತೀರಿಸುವುದಕ್ಕೋಸ್ಕರ ಕೈಗೊಂಡ ದುಡುಕಿನ ನಿರ್ಧಾರದಿಂದಾಗಿ ಈ ಘಟನೆ ನಡೆದಿದ್ದು, ಇದಕ್ಕೆ ಮುಖ್ಯಮಂತ್ರಿಗಳೇ ನೇರ ಹೊಣೆಗಾರರಾಗಿದ್ದು ಈ ಕೂಡಲೇ ಅವರು ರಾಜೀನಾಮೆ ನೀಡಬೇಕೆಂದು ಅರುಣ ಕಾರಜೋಳ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಸಂಗಣ್ಣಾ ಕಾತರಕಿ, ಗುರುಪಾದ ಕುಳಲಿ, ನಾಗಪ್ಪ ಅಂಬಿ, ಗೋಲಪ್ಪ ಗೋಲಶೆಟ್ಟಿ ಉಪಸ್ಥಿತರಿದ್ದರು.

ಪತ್ರಕರ್ತರಿಗೆ ಅಗೌರವ ತೋರಿದ ಮಾಜಿ ಶಾಸಕ ಡಿ.ಜಿ. ಪಾಟೀಲ ಹೇಳಿಕೆ ಖಂಡಿಸಿ ಬಹಿರಂಗ ಕ್ಷಮೆಗೆ ಆಗ್ರಹ

ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶಿವಶರಣಪ್ಪಗೌಡ್ರ ಪಾಟೀಲ್ ನಿಧನ.